Hot Posts

10/recent/ticker-posts

ಅಚ್ಚರಿ : ರೂಪಾಯಿ ಅಪಮೌಲ್ಯಕ್ಕೆ ರಾಗಿಯೇ ಮದ್ದು.!











ವಾಷಿಂಗ್ಟನ್
: ನಾವು 65 ರೂಪಾಯಿಗಳನ್ನು ಕೊಟ್ಟರೆ ಅಮೇರಿಕಾದವರು ನಮಗೆ
ಒಂದು ಡಾಲರ್ಕೊಡ್ತಾರೆ. ಆದ್ರೆ
ನಾವು ಒಂದು ಕಿಲೋ ರಾಗಿಯನ್ನು
ಅಮೇರಿಕಾದವರಿಗೆ ಕೊಟ್ಟರೆ ಅವರು 800 ರೂಪಾಯಿಗಳನ್ನು
ಕೊಡ್ತಾರೆ..!





ನ್ಯೂಟ್ರಿಷನ್ಸ್ನ್ನು ಹೆಚ್ಚಿನ ಪ್ರಮಾಣದಲ್ಲಿ
ಹೊಂದಿರುವ ರಾಗಿಗೆ ಅಮೇರಿಕಾ ಸೇರಿದಂತೆ
ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.
ಬೇಡಿಕೆಯನ್ನು ಪೂರೈಸುವಷ್ಟು
ರಾಗಿ ಉತ್ಪಾದನೆ ಪಾಶ್ಚಿಮಾತ್ಯ ದೇಶಗಳಲ್ಲಿ ಆಗುತ್ತಿಲ್ಲ. ಹೀಗಾಗಿ ಪಾಶ್ಚಾತ್ಯ ದೇಶಗಳು
ಭಾರತ ಮತ್ತು ಇತರೇ ದೇಶಗಳನ್ನೇ
ಅವಲಂಬಿಸಿವೆ. ಇನ್ನು ಕೆಲವೊಂದು ಸಂಸ್ಥೆಗಳು
ಅಂತರ್ಜಾಲದಲ್ಲಿ ರಾಗಿಯನ್ನು ಇಡೀ ವಿಶ್ವಕ್ಕೆ ಅತ್ಯಂತ
ದುಬಾರಿ ದರದಲ್ಲಿ ಮಾರಾಟ ಮಾಡಿ
ಲಾಭ ಮಾಡಿಕೊಳ್ತಿದೆ.





ಆಹಾರ ಭದ್ರತಾ ಕಾಯಿದೆ ಮತ್ತು
ಅನ್ನ ಭಾಗ್ಯದಿಂದಾಗಿ ಭಾರತ ಮತ್ತು ಕರ್ನಾಟಕದಲ್ಲಿ
1 ರೂಪಾಯಿಗೆ ಕಿಲೋ ರಾಗಿ ಸಿಗುತ್ತದೆ.
ಆದರೆ ಇದೇ ರಾಗಿಗಾಗಿ ಅಮೇರಿಕಾದಲ್ಲಿ
800 ರೂಪಾಯಿಗಳನ್ನು ಪಾವತಿಸಬೇಕಾಗಿದೆ. ಅಂದರೆ ಅಮೇರಿಕಾ ಡಾಲರ್
ನಲ್ಲಿ ಹೇಳೋದಾದರೆ ಬರೋಬ್ಬರಿ 12.10 ಯುಎಸ್ಡಾಲರ್‌.





ಅಮೇರಿಕಾದ
ಡಾಲರ್ಎದುರು ರೂಪಾಯಿ ಮೌಲ್ಯ
ಕುಸಿಯುತ್ತಿದೆ. ಹೀಗಿರುವಾಗ ಒಂದು ರೂಪಾಯಿ ಕಿಲೋ
ಇರುವ ರಾಗಿಯನ್ನು ನಾವು ಅಮೇರಿಕಾಗೆ 800 ರೂಪಾಯಿಗಳಿಗೆ
ಮಾರಾಟ ಮಾಡಿದರೆ, ರಾಗಿಯ ಎದುರು ಅಮೇರಿಕಾ
ಅಪಮೌಲ್ಯಗೊಳ್ಳುವ ದಿ೮ನ ದೂರ ಇಲ್ಲ.





ಏನಂತೀರಿ?
ಹಾಗೇನಾದ್ರೂ ಆದರೆ ಇಟ್ಟಂ ತಿಂದಂ
ಬೆಟ್ಟಂ ಕಿತ್ತಂ ಎಂಬ ಗಾದೆಯ
ಜೊತೆಗೆ "ರಾಗಿ ಬೆಳೆದವಂ, ಮಿಲೇನಿಯರ್
ಆದಂ" ಅನ್ನೋ ಹೊಸ ಗಾದೆ
ಕೂಡ ಹುಟ್ಟಿಕೊಳ್ಳಲಿದೆ.


Отправить комментарий

0 Комментарии