Hot Posts

10/recent/ticker-posts

ರಾಷ್ಟ್ರಪತಿಯೇ ಓಟ್ ಹಾಕಿಲ್ಲ..!






ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದ ಪ್ರಥಮ
ಪ್ರಜೆ
, ರಾಷ್ಟ್ರಪತಿ ಪ್ರಣಬ್​​ ಮುಖರ್ಜಿ ಮತದಾನ
ಮಾಡಿಲ್ಲ
.
ರಾಷ್ಟ್ರಪತಿಗಳ ಪತ್ರಿಕಾ ಕಾರ್ಯದರ್ಶಿ ವೇಣು ರಾಜಮೊನಿ ಈ ವಿಷಯ
ಸ್ಪಷ್ಟಪಡಿಸಿದ್ದಾರೆ
. ರಾಜಕೀಯ ಜಿದ್ದಾಜಿದ್ದಿ ಚುನಾವಣೆಯಲ್ಲಿ ಯಾವುದೇ
ಒಂದು ಪಕ್ಷದ ಪರ ಮತದಾನ ಮಾಡದೆ ತಟಸ್ಥವಾಗಿರುವ ದಿಸೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು
ಹೇಳಲಾಗಿದೆ. ಮುಖರ್ಜಿ ಅಷ್ಟೇ ಅಲ್ಲ
, ಈ ಹಿಂದಿನ ರಾಷ್ಟ್ರಪತಿಗಳಲ್ಲಿ ಬಹುತೇಕರು
ಇದೇ ಸಂಪ್ರದಾಯವನ್ನು ಪಾಲಿಸಿಕೊಂಡುಬಂದಿದ್ದಾರೆ. ಹೀಗಾಗಿ ಪ್ರಣಬ್ ಮುಖರ್ಜಿ ಕೂಡ ಇದೇ
ಸಂಪ್ರದಾಯವನ್ನು ಮುಂದುವರಿಸುತ್ತಿದ್ದಾರೆ..







ರಾಷ್ಟ್ರಪತಿಗಳು ಏಕೆ ಮತದಾನ ಮಾಡಲ್ಲ..?





ಸಂವಿಧಾನದ ಪ್ರಕಾರ ರಾಷ್ಟ್ರಪತಿಗಳು ಮತದಾನ
ಮಾಡಬಾರದು ಎಂಬ ಕಟ್ಟುಪಾಡೇನೂ ಇಲ್ಲ.. ಆದರೆ, ರಾಷ್ಟ್ರಪತಿಗಳು ಎಲ್ಲಾ ಪಕ್ಷಗಳನ್ನು ಸಮಾನ
ದೃಷ್ಟಿಯಿಂದ ನೋಡಬೇಕು. ಹೀಗಾಗಿ, ಮತದಾನ ಮಾಡಿದರೆ, ಯಾವುದೋ ಒಂದು ಪಕ್ಷದ ಪರವಾಗಿ
ನಿಂತತಾಗುತ್ತದೆ. ಹೀಗಾಗಿ ರಾಷ್ಟ್ರಪತಿಗಳು ಒಂದು ಪಕ್ಷದ ಪರವಾಗಿದ್ದಾರೆ ಎಂಬುದನ್ನು ತೊಡೆದು
ಹಾಕುವ ನಿಟ್ಟಿನಲ್ಲಿ, ಮತದಾನವನ್ನು ಮಾಡುತ್ತಿಲ್ಲ. ಈ ಹಿಂದಿನ ಎಲ್ಲಾ ರಾಷ್ಟ್ರಪತಿಗಳು ಕೂಡ,
ಹುದ್ದೆಯಲ್ಲಿರುವವರೆಗೂ, ಮತದಾನವನ್ನು ಮಾಡಿರಲಿಲ್ಲ





ಪ್ರಣಬ್ಮುಖರ್ಜಿ ಕೋಲ್ಕತ್ತ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದರು. 2014 ರ ಮೇ 12 ರಂದು ಕೊಲ್ಕತ್ತಾದಲ್ಲಿ ಮತದಾನ ನಡೀತು.. ಆದರೆ,
ಮತದಾನದ ಮಾಡದೇ ಇರುವುದರ ಮೂಲಕ, ತಟಸ್ಥ ನೀತಿಯನ್ನು ಅನುಸರಿಸಿದ್ದಾರೆ.


ಈ ಹಿಂದೆ ಅಂಚೆ ಮೂಲಕವೇ ಮತದಾನ ಮಾಡುವುದಕ್ಕೆ
ರಾಷ್ಟ್ರಪತಿಗಳು ನಿರ್ಧರಿಸಿದ್ದರು
. ಆದರೆ ನಂತರ ಈ ನಿರ್ಧಾರವನ್ನು ಬದಲಿಸಿ­ದ್ದಾರೆ ಎಂದು ತಿಳಿಸಲಾಗಿದೆ.





Отправить комментарий

0 Комментарии